ಕೆಲವು ನುಡಿಗಟ್ಟುಗಳು ಮತ್ತು ಅವುಗಳ ಅರ್ಥ :
*ಸೆರಗಿನಲ್ಲಿ ಕೆಂಡ ಕಟ್ಟಿಕೊಳ್ಳು - ಅಪಾಯವನ್ನು ಬಳಿಯಲ್ಲಿಟ್ಟುಕೊಳ್ಳು
* ಮೂಗುದಾರ ತೊಡಿಸು - ಹತೋಟಿಯಲ್ಲಿಡು
* ಕಿವಿಯಲ್ಲಿ ಗಾಳಿಯೂದು - ಹುರಿದುಂಬಿಸು
* ಉಂಡಮನೆಗಳ ಎಣಿಸು - ಉಪಕರಿಸಿದವರಿಗೆ ಅಪಕಾರ ಮಾಡು
* ಕೆರೆದೊಳಗಿನ ಕಲ್ಲು - ಒಳಗಿದ್ದು ಕೀಟಲೆ ಮಾಡುವವನು
* ಅಡ್ಡಗಾಲು ಹಾಕು - ತಡೆಹಾಕು
* ಅಡ್ಡಗೋಡೆಯ ಮೇಲೆ ದೀಪ - ಅಸ್ಪಷ್ಠ ನಿರ್ಣಯ
* ಅರಣ್ಯರೋಧನ - ನಿಷ್ಪಲಮೊರೆ
* ಅಜಗಜಾಂತರ - ಭಾರಿ ವ್ಯತ್ಯಾಸ
* ಈ ಕಿವಿಯಲ್ಲಿ ಕೇಳಿ ಈ ಕಿವಿಯಲ್ಲಿ ಬಿಡು - ತಟಸ್ಥನಾಗಿರು
* ಬಾಯಿಕಟ್ಟು - ಇನ್ನೊಬ್ಬರು ಮಾತನಾಡದಂತೆ ಮಾಡುವುದು
* ಬಲಿಬೀಳು - ಸೆರೆಯಾಗು
* ಬೆನ್ನುಹತ್ತು - ಹಿಂಬಾಲಿಸು
* ಹೃದಯ ಕಲ್ಲಾಗು - ನಿಷ್ಕರುಣೆ
* ಬೆನ್ನುಬೀಳು - ಆಶ್ರಯಿಸು
* ಹನುಮಂತನ ಬಾಲ - ಮುಗಿಯಲಾರದ್ದು
* ಸಿಂಹಪಾಲು - ದೊಡ್ಡಭಾಗ
* ಶುಕ್ರದೆಸೆ - ಒಳ್ಳೆಯ ಸ್ಥಿತಿ
* ಸ್ವರ್ಗ ಒಂದೇ ಗೇಣು - ಸುಖ ಸನ್ನಿಹಿತ
* ಭಗೀರಥ ಪ್ರಯತ್ನ - ಶಕ್ತಿ ಮೀರಿದ ಪ್ರಯತ್ನ
* ಎದೆತುಂಬಿಬರು - ಭಾವಪರವಶನಾಗು
* ಎಲ್ಲರ ನಾಲಿಗೆ ಮೇಲಿರು - ಪ್ರಸಿದ್ದ ವ್ಯಕ್ತಿಯೆನಿಸು
* ಏತಿಯೆಂದರೆ ಪ್ರೇತಿಯೆನ್ನು - ಪ್ರತಿಯೊಂದಕ್ಕೂ ವ್ಯತಿರಿಕ್ತವಾಗಿ ಹೇಳು
* ಉಪ್ಪುಕಾರ ಹಚ್ಚಿ ಹೇಳು - ಇಲ್ಲದುದೆಲ್ಲವನ್ನು ಹೇಳು
* ಉಕ್ಕಿನ ಕಡಲೆ - ಅತಿ ಕಠಿಣ ಕಾರ್ಯ
* ಅಜ್ಜಿಕತೆ - ಕಟ್ಟುಕತೆ
* ಅಜ್ಜನ ಕಾಲದ್ದು - ಬಹು ಹಳೆಯದು
* ಅಟ್ಟಕ್ಕೇರಿಸು - ಹೊಗಳಿ ಹೊಗಳಿ ಹುಬ್ಬಿಸು
* ಅಮವಾಸ್ಯೆ ಗೊಮ್ಮೆ ಹುಣ್ಣುಮೆ ಗೊಮ್ಮೆ - ಬಹು ಅಪರೂಪ
* ಅವತಾರ ಮುಗಿಯುವುದು - ಪ್ರಭಾವ ಕುಗ್ಗು
* ಅಳಿಲು ಸೇವೆ - ನಿಷ್ಠೆಯಿಂದ ಮಾಡಿದುದು
* ಇಕ್ಕಳದಲ್ಲಿ ಸಿಕ್ಕಿಸು - ತೊಂದರೆಗೆ ಉಂಟುಮಾಡು
*ಉತ್ಸವನಮೂರ್ತಿ - ಸೋಮಾರಿ, ತೋರಿಕೆಗೆ ಮಾತ್ರವಿರುವ
* ಉಭಯ ಸಂಕಟ - ಸಂದಿಗ್ಧ ಸ್ಥಿತಿ
*ಎತ್ತಂಗಡಿಯಾಗು - ವರ್ಗವಾಗು
* ಎದೆ ಹಗುರವಾಗು - ಹೊಣೆಗಾರಿಕೆ ಕಡಿಮೆಯಾಗು
*ಎರಡು ನಾಲಿಗೆ - ಸಂದೇಹಾಸ್ಪದಕವಾಗಿ
* ಏಳು ಕೆರೆ ನೀರು ಕುಡಿದವ - ಅನುಭವವುಳ್ಳ ವ್ಯಕ್ತಿ
* ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ - ಪಕ್ಷಪಾತ ಮಾಡು
* ಓಬಿರಾಯನ ಕಾಲ - ಹಳೆಕಾಲ
* ಕತೆ ಪುರಾಣ - ಯಾರಿಗೂ ಬೇಡವಾದದ್ದು
*ಕಣ್ಣಿಗೆ ಮಣ್ಣೆರಚು - ಮೋಸಮಾಡು
* ಕಂಬಿಕೀಳು - ಫಲಾಯನ ಮಾಡು
* ಕಣ್ಣು ತಪ್ಪಿಸು - ಮಾಯಾವಾಗು
* ಕಣ್ಣು ಹಾಯಿಸು - ಪರಿಶೀಲಿಸು
* ಕಾಲಿಗೆ ಬುದ್ದಿ ಹೇಳು - ಓಡಿಹೋಗು
*ಕೈ ಬಿಸಿ ಮಾಡು - ಲಂಚ ಕೊಡು
* ಗಾಯದ ಮೇಲೆ ಬರೆ ಎಳೆ - ನೋವಿನ ಮೇಲೆ ನೋವುಂಟು ಮಾಡು
No comments:
Post a Comment