'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ

'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ

Pages

ಶೈಕ್ಷಣಿಕ

📚🖨🖥👉ಶೈಕ್ಷಣಿಕ ದಾಖಲೆಗಳು, ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳು,ಶೈಕ್ಷಣಿಕ ಸಂಪನ್ಮೂಲಗಳು,ಮಾದರಿ ಪ್ರಶ್ನೆ ಪತ್ರಿಕೆಗಳು, ಮಾದರಿ ಪಾಠಯೋಜನೆಗಳು,ಅಕ್ಷರ ದಾಸೋಹ,ಶಿಕ್ಷಣ ಇಲಾಖೆ ಆದೇಶಗಳು,ಪಠ್ಯ ಪುಸ್ತಕಗಳ ನೋಟ್ಸ್‌, CCE, ONLINE ಸೇವೆಗಳು,ತರಬೇತಿ ಸಾಹಿತ್ಯಗಳು, ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ದಾಖಲೆಗಳು, ....ಇನ್ನೂ ಹಲವು ಉಪಯುಕ್ತ ಸೇವೆಗಳು ನಮ್ಮ ಶಿಕ್ಷಕರಿಗಾಗಿ...📚🖥👈

my name

ಕುಮಾರ.ಎನ್‌ ,ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾದನಾಯಕನಹಳ್ಳಿ, ಮದ್ದೂರು ತಾ|| ಮಂಡ್ಯ ಜಿಲ್ಲೆ||

ಇತ್ತೀಚಿನ ಪೋಸ್ಟ್ ಗಳಿಗಾಗಿ✍✍

Showing posts with label 2024-25 ನೇ ಸಾಲಿನ ಜೂನ್‌ ತಿಂಗಳ ಶೈಕ್ಷಣಿಕ ಕಾರ್ಯಕ್ರಮಗಳು. Show all posts
Showing posts with label 2024-25 ನೇ ಸಾಲಿನ ಜೂನ್‌ ತಿಂಗಳ ಶೈಕ್ಷಣಿಕ ಕಾರ್ಯಕ್ರಮಗಳು. Show all posts

2024-25 ನೇ ಸಾಲಿನ ಜೂನ್‌ ತಿಂಗಳ ಶೈಕ್ಷಣಿಕ ಕಾರ್ಯಕ್ರಮಗಳು

2024-25 ನೇ ಸಾಲಿನ ಜೂನ್‌ ತಿಂಗಳ ಶೈಕ್ಷಣಿಕ ಕಾರ್ಯಕ್ರಮಗಳ / ಚಟುವಟಿಕೆಗಳ ಕಾರ್ಯಸೂಚಿ.

01.06.2024 ರಿಂದ 29.06.2024ರ ವರೆಗೆ 1 ನೇ ತರಗತಿ ವಿದ್ಯಾ ಪ್ರವೇಶ 2 ರಿಂದ 3ನೇ ತರಗತಿ

01.06.2024 ರಿಂದ 15.06.2024 ರವರೆಗೆ 4 ರಿಂದ 10ನೇ ತರಗತಿವರೆಗೆ👇


👉ವಿದ್ಯಾಪ್ರವೇಶ ಸೇತುಬಂಧ ಶಿಕ್ಷಣ ಅನುಷ್ಠಾನ, ಸೇತುಬಂಧ ಕಾರ್ಯಕ್ರಮದ ಉದ್ದೇಶ, ವ್ಯಾಪ್ತಿ ಹಾಗೂ ಮಹತ್ವವನ್ನು ಪರಿಚಯಿಸುವುದರೊಂದಿಗೆ ವಾರ್ಷಿಕ ಪಾಠ ಯೋಜನೆಯಲ್ಲಿ ನಿಗಧಿಪಡಿಸಿದಂತೆ ಶೇ10 ರಷ್ಟು ಪಾಠಬೋಧನೆ ನಿರ್ವಹಿಸುವುದು.

ಸೇತುಬಂಧ ಶಿಕ್ಷಣವನ್ನು 1 ರಿಂದ 3ನೇ ತರಗತಿಗಳಿಗೆ 30 ದಿನಗಳು.

ಹಾಗೂ 4 ರಿಂದ 10ನೇ ತರಗತಿಗಳಿಗೆ 15 ದಿನಗಳು ಮಾತ್ರ ಸೇತುಬಂಧ

ಶಿಕ್ಷಣವನ್ನು ಇಲಾಖೆ ನಿಗಧಿಪಡಿಸಿದ ಮಾರ್ಗಸೂಚಿಯಂತೆ ನಿರ್ವಹಿಸುವುದು.

ಶಿಕ್ಷಕರ ಬಳಿ ಕಳೆದ ಸಾಲಿನಲ್ಲಿ ನಡೆಸಿದ ಮೌಲ್ಯಾಂಕನ ವಿಶ್ಲೇಷಣೆಯ

ವರದಿಯಂತೆ ಕಲಿಕಾ ಕೊರತೆಗಳ ದತ್ತಾಂಶಗಳು ಲಭ್ಯವಿರುತ್ತವೆ.

ಇವುಗಳನ್ನು ಅವಲೋಕಿಸಿ, ವಿಶ್ಲೇಷಿಸುವುದು. ಇದಕ್ಕೆ ಪೂರಕವಾಗಿ

ನೈದಾನಿಕ ಪರೀಕ್ಷೆ ಹಮ್ಮಿಕೊಂಡು ಫಲಿತಾಂಶ ವಿಶ್ಲೇಷಿಸಬೇಕು.

1ರಿಂದ 3ನೇ ತರಗತಿಗೆ ದಿನಾಂಕ:06.06.2024ರಂದು ಪೂರ್ವ ಪರೀಕ್ಷೆಯನ್ನು

ನಡೆಸಿ, ವಿಶ್ಲೇಷಿಸಿ, ಕಲಿಕಾ ಹಿನ್ನಡೆ ಗುರುತಿಸಿ ಪರಿಹಾರ ಬೊಧನೆ

ನೀಡುವುದು. ನಂತರ ದಿನಾಂಕ:20.06.2024ರಂದು ಸಾಪಲ್ಯ ಪರೀಕ್ಷೆಯನ್ನು ನಿರ್ವಹಿಸುವುದು.

4 ರಿಂದ 10ನೇ ತರಗತಿಗೆ ದಿನಾಂಕ:06.06.2024ರಂದು ಪೂರ್ವ ಪರೀಕ್ಷೆ

ನಡೆಸಿ, ವಿಶ್ಲೇಷಿಸಿ ಕಲಿಕಾ ಹಿನ್ನಡೆ ಗುರುತಿಸಿ ಪರಿಹಾರ ಬೊಧನೆ

ನೀಡುವುದು. ನಂತರ ದಿನಾಂಕ:13.06.2024ರಂದು ಸಾಫಲ್ಯ ಪರೀಕ್ಷೆ ನಡೆಸಿ

ವಿಶ್ಲೇಷಿಸಿ, ನಿರಂತರ ಪರಿಹಾರ ಬೋಧನೆಗೆ ಅಗತ್ಯ ಮಕ್ಕಳ ಗುರುತಿಸುವುದು.

ದಿನಾಂಕ: 01.06.2024 ರಿಂದ 06.06.2024 ರವರೆಗೆ

ಪುಸ್ತಕ ಪರಿಚಯ  ಅವಧಿಗಳು &ನಿರ್ವಹಣೆ

ವಾರ್ಷಿಕ ಪಾಠ ಯೋಜನೆ/ ಕ್ರಿಯಾ ಯೋಜನೆಯನ್ನು ವಿವರಿಸಿ ಮಾಹೆವಾರು

ಯೋಜಿಸಿದ ಪರೀಕ್ಷೆಗಳು / ಮೌಲ್ಯಾಂಕನ ವಿಶ್ಲೇಷಣೆ (ಸಿ.ಸಿ.ಇ) ಪಠ್ಯದಲ್ಲಿನ

ಅಧ್ಯಾಯಗಳ ಮುಖ್ಯಾಂಶಗಳು, ಹಿಂದಿನ ತರಗತಿಯಲ್ಲಿನ

ಕಲಿಕಾಂಶಗಳೊAದಿಗೆ ಪ್ರಸ್ತುತ ಪಾಠಕ್ಕೆ ಹೊಂದಾಣಿಕೆ ಮಾಡಿ

ನಿರ್ವಹಿಸುವುದು. ಆಂತರಿಕ/ಬಾಹ್ಯ ಮೌಲ್ಯಮಾಪನ ವಿಶ್ಲೇಷಣೆ ಬಗ್ಗೆ ಇತರೆ

ಕಾರ್ಯಕ್ರಮಗಳ ನಿರ್ವಹಣೆ ಮತ್ತು ಮಹತ್ವ, ಪಾಲ್ಗೊಳ್ಳುವಿಕೆ ಕುರಿತಾದ

ಮುಖ್ಯಾಂಶಗಳನ್ನು ವಿವರಣೆ ನೀಡಿ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ

ಮೂಡಿಸುವುದು.

ದಿನಾಂಕ: 01.06.2024 ರಿಂದ 06.06.2024 ರವರೆಗೆ

ಪುಸ್ತಕ ಪರಿಚಯ ಅವಧಿಗಳು & ನಿರ್ವಹಣೆ

ವಾರ್ಷಿಕ ಪಾಠ ಯೋಜನೆ/ ಕ್ರಿಯಾ ಯೋಜನೆಯನ್ನು ವಿವರಿಸಿ ಮಾಹೆವಾರು

ಯೋಜಿಸಿದ ಪರೀಕ್ಷೆಗಳು / ಮೌಲ್ಯಾಂಕನ ವಿಶ್ಲೇಷಣೆ (ಸಿ.ಸಿ.ಇ) ಪಠ್ಯದಲ್ಲಿನ

ಅಧ್ಯಾಯಗಳ ಮುಖ್ಯಾಂಶಗಳು, ಹಿಂದಿನ ತರಗತಿಯಲ್ಲಿನ

ಕಲಿಕಾಂಶಗಳೊಂದಿಗೆ ಪ್ರಸ್ತುತ ಪಾಠಕ್ಕೆ ಹೊಂದಾಣಿಕೆ ಮಾಡಿ

ನಿರ್ವಹಿಸುವುದು. ಆಂತರಿಕ/ಬಾಹ್ಯ ಮೌಲ್ಯಮಾಪನ ವಿಶ್ಲೇಷಣೆ ಬಗ್ಗೆ ಇತರೆ

ಕಾರ್ಯಕ್ರಮಗಳ ನಿರ್ವಹಣೆ ಮತ್ತು ಮಹತ್ವ, ಪಾಲ್ಗೊಳ್ಳುವಿಕೆ ಕುರಿತಾದ

ಮುಖ್ಯಾಂಶಗಳನ್ನು ವಿವರಣೆ ನೀಡಿ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ

ಮೂಡಿಸುವುದು.

ವಿವಿಧ ಕ್ಲಬ್‌ಗಳ ರಚನೆ

ವಿದ್ಯಾರ್ಥಿಗಳ ಪ್ರತಿಭೆಗಳನ್ನಾಧರಿಸಿ ಅವರ ಆಸಕ್ತಿ ಕ್ಷೇತ್ರ ಪರಿಚಯಿಸಿ

ಶಾಲೆಯಲ್ಲಿ ವಿವಿಧ ರೀತಿಯ ಕ್ಷೇತ್ರವಾರು ಸಂಘಗಳನ್ನು /ಕ್ಲಬ್‌ಗಳನ್ನು

(ಸಾಹಿತ್ಯ/ ಕ್ರೀಡಾ/ ವಿಜ್ಞಾನ/ ಕಲಾ/ ಸಾಂಸ್ಕೃತಿಕ ಕ್ಲಬ್‌ಗಳು/ ವಿದ್ಯಾರ್ಥಿಗಳ

ಸಂಘಗಳು, ಇಕೋಕ್ಲಬ್, ಇತರೆ) ರಚಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ

ಜವಾಬ್ದಾರಿ ನೀಡುವುದು.

ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಆಧರಿಸಿ ಶ್ರೇಣಿಕರಿಸುವುದು.

ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಆಧರಿಸಿ 06 ಗುಂಪುಗಳನ್ನಾಗಿಸಿ ಹಿರಿಯ

ಪ್ರಾಥಮಿಕ ಶಾಲೆ/ ಪ್ರೌಢಶಾಲೆಯಲ್ಲಿ ವಿಷಯವಾರು ಶಿಕ್ಷಕರಿಗೆ ದತ್ತು

ನೀಡುವುದು ಹಾಗೂ ಈ ಗುಂಪುಗಳಿಗೆ ಪ್ರತಿ ಮಾಹೆವಾರು ಸಿ.ಸಿ.ಇ ಅಡಿ

ಶೈಕ್ಷಣಿಕ ಚಟುವಟಿಕೆಗಳನ್ನು (Project Works) ಸ್ಪರ್ಧಾತ್ಮಕವಾಗಿ

ನೀಡುವುದರೊಂದಿಗೆ ಆಯಾ ಮಾಹೆಯಲ್ಲಿ ನಿರ್ವಹಿಸಿದ ಬೋಧನಾಂಶಗಳ/

ಕಲಿಕಾ ಪ್ರಗತಿಯನ್ನು ಪರಿಶೀಲಿಸುವುದು.  (ಅನುಬಂಧದಲ್ಲಿನ ಚಟುವಟಿಕೆ ಬ್ಯಾಂಕ್ ಗಮನಿಸಿ).

05.06.2024 ವಿಶ್ವ ಪರಿಸರ ದಿನಾಚರಣೆ.

ಪ್ರಾರ್ಥನಾ ಸಮಯವನ್ನು ಮಾತ್ರ ಬಳಸಿಕೊಂಡು ವಿಶ್ವ ಪರಿಸರ ದಿನದ

ಮಹತ್ವ ತಿಳಿಸುವುದು.

12.06.2024 ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ.

ಪ್ರಾರ್ಥನಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಅವಧಿಯ ನಂತರ

ಸಮುದಾಯಕ್ಕೆ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ಮಹತ್ವ ತಿಳಿಸುವುದು.

15.06.2024 ರಿಂದ 29.06.2024

ವಾರ್ಷಿಕ ಪಾಠ ಯೋಜನೆಯಲ್ಲಿ ನಿಗಧಿಪಡಿಸಿದಂತೆ ಶೇ. 10 ಪಠ್ಯವಸ್ತು ಬೋಧನೆ ನಿರ್ವಹಿಸುವುದು.

ಸೇತುಬಂಧಗಳ ಜೊತೆಯಲ್ಲಿ 1 ರಿಂದ 3 ನೇ ತರಗತಿಗಳಿಗೆ ವಾರ್ಷಿಕ ಪಾಠ

ಹಂಚಿಕೆಯಲ್ಲಿ ನಿಗಧಿಪಡಿಸಿದಂತೆ ಶೇ. 5 ರಷ್ಟು ಪಠ್ಯವಸ್ತು ಬೋಧನೆ ಕೈಗೊಳ್ಳುವುದು.

ಸೇತುಬಂಧ ಶಿಕ್ಷಣ ಮುಗಿದ 4 ರಿಂದ 10ನೇ ತರಗತಿಗಳಿಗೆ

ದಿನಾಂಕ: 15.06.2024 ರಿಂದಲೇ ಶೇ. 10 ರಷ್ಟು ಪಾಠ ಬೋಧನೆ ಪ್ರಾರಂಭಿಸಿ/ನಿರ್ವಹಿಸಿ

ಬೋಧನಾ ಕಲಿಕಾ ಪ್ರಕ್ರಿಯೆಗೆ ಚಾಲನೆ ನೀಡುವುದು.

26.06.2024 ರಿಂದ 29.06.2024

ಸಿ.ಸಿ.ಇ ಚಟುವಟಿಕೆ-1 (Project) ನಿರ್ವಹಿಸುವುದು.

ಸಿ.ಸಿ.ಇ ಅಡಿ ವಿದ್ಯಾರ್ಥಿಗಳಿಗೆ ಆಯಾ ಮಾಹೆಯಲ್ಲಿ ಮುಕ್ತಾಯವಾದ

ಪಠ್ಯಾಧಾರಿತ ಚಟುವಟಿಕೆಯನ್ನು ಸಂಘಟಿಸಿ (ಚಟುವಟಿಕೆ ಬ್ಯಾಂಕ್‌ನ್ನು

ಅನುಬಂಧಿಸಿದೆ) ತರಗತಿವಾರು/ವಿಷಯವಾರು ನಿರ್ವಹಿಸುವುದು. ಸದರಿ

ಚಟುವಟಿಕೆಯನ್ನು ತರಗತಿವಾರು ಆಧ್ಯತೆ ಮತ್ತು ಅವಶ್ಯಕತೆವಾರು ಸಂಘಟಿಸಿ

ಸಿ.ಸಿ.ಇ ಅಡಿ ಕಲಿಕಾ ಪ್ರಗತಿಯನ್ನು ಪ್ರತ್ಯೇಕವಾಗಿ ದಾಖಲಿಸುವುದು.

ಇದರಿಂದಾಗಿ ಆಯಾ ಮಾಹೆಯ ಬೋಧನಾಂಶಗಳ ಕಲಿಕಾ ಪ್ರಗತಿಯನ್ನು

ಪುನಾರವರ್ತನೆಯೊಂದಿಗೆ ವಿಶ್ಲೇಷಿಸಿದಂತಾಗುತ್ತದೆ.

ಪಠ್ಯಪೂರಕ ಚಟುವಟಿಕೆಗಳು ಶಾಲಾ ಹಂತದಲ್ಲಿ ವಿವಿಧ ಶೈಕ್ಷಣಿಕ ಕ್ಲಬ್‌ಗಳನ್ನು

ರಚನೆ/ಬೋಧನೋಪಕರಣ, ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾ ಹಾಗೂ

ಇ-ಕಲಿಕಾ ಕೇಂದ್ರಗಳ ಸಬಲೀಕರಣಗೊಳಿಸುವುದು. 


                                                                                                       ಕೃಪೆ: ಶೈಕ್ಷಣಿಕ ಮಾರ್ಗಸೂಚಿ